ಶ್ರೀಮುರಳಿಭರಾಟೆ - ಚೇತನ್ ಕುಮಾರ್ ಬರೆದು ನಿರ್ದೇಶಿಸಿದ 2019 ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ನಾಟಕ ಚಲನಚಿತ್ರವಾಗಿದೆ. ಚಿತ್ರವು ಶ್ರೀ ಜಗದ್ಗುರು ಮೂವೀಸ್ ಬ್ಯಾನರ್ನಡಿಯಲ್ಲಿ ಸುಪ್ರೀತ್ ನಿರ್ಮಿಸಿದ್ದಾರೆ. ಆಗಸ್ತ್ಯ ಎಂಟರ್ಪ್ರೈಸಸ್ ಅಡಿಯಲ್ಲಿ ಶ್ರೀಮುರಳಿ ಪ್ರಸ್ತುತಪಡಿಸಿದ್ದಾರೆ . ಇದರಲ್ಲಿ ಶ್ರೀಮುರಳಿ ಅವರು ಮತ್ತು ಶ್ರೀ ಲೀಲಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶ್ರೀಮುರಳಿ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ತಾರಾ, ರಂಗಾಯಣ ರಘು, ಗಿರಿ ಶಿವಣ್ಣ, ಅವಿನಾಶ್, ಶರತ್ ಲೋಹಿತಾಸ್ವ, ಸಾಯಿ ಕುಮಾರ್, ಪಿ. ರವಿಶಂಕರ್, ಅಯ್ಯಪ್ಪ ಪಿ. ಶರ್ಮಾ ಮತ್ತು ಸಾಧು ಕೋಕಿಲ ಇದ್ದಾರೆ. ಚಿತ್ರಕ್ಕೆ ಹಿನ್ನೆಲೆಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣವನ್ನು ಗಿರೀಶ್ ಆರ್. ಗೌಡ ಮಾಡಿದ್ದಾರೆ. ಇದನ್ನು ದೀಪು ಎಸ್.ಕುಮಾರ್ ಸಂಪಾದಿಸಿದ್ದಾರೆ. == ಕಥಾವಸ್ತು == ಕಥೆಯು ಜೋಧ್‌ಪುರದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುವ ಆಯುರ್ವೇದ ಪಂಡಿತರ ಮಗನಾದ ಜಗನ್ (ಶ್ರೀಮುರಳಿ) ಸುತ್ತ ಸುತ್ತುತ್ತದೆ. ಜಗನ್ ತನ್ನ ತಾಯಿಯೊಂದಿಗೆ ಒಂದು ಧಾರ್ಮಿಕ ಕ್ರಿಯೆಯನ್ನು ಮಾಡುವ ಸಲುವಾಗಿ ತನ್ನ ಊರಿಗೆ ಪ್ರಯಾಣಿಸುತ್ತಾನೆ. ಅಲ್ಲಿ ಅವನು ತನ್ನ ಪ್ರತಿಷ್ಠಿತ ಕುಟುಂಬದ ಇತಿಹಾಸವನ್ನು ಕಲಿಯುತ್ತಾನೆ ಮತ್ತು ಐತಿಹಾಸಿಕ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. == ಪಾತ್ರವರ್ಗ ಮತ್ತು ಪಾತ್ರಗಳು == ಶ್ರೀಮುರಳಿ ಜಗನ್ ಮೋಹನ್ ಮತ್ತು ಜಯರತ್ನಾಕರ ಪಾತ್ರಗಳಲ್ಲಿ ರಾಧೆಯಾಗಿ ಶ್ರೀ ಲೀಲಾ ಜಗನ್ ಮೋಹನನ ತಾಯಿಯಾಗಿ ತಾರಾ ಪಟೇಲನಾಗಿ ರಂಗಾಯಣ ರಘು ಗಿರಿ ಶಿವಣ್ಣ ಜಗನ್ ಮೋಹನ್ ತಂದೆಯಾಗಿ ಸುಮನ್ ಬಲ್ಲಾಳನಾಗಿ ಸಾಯಿಕುಮಾರ್ ಪಲ್ಲವನಾಗಿ ಪಿ.ರವಿಶಂಕರ್ ವೀರಪ್ಪ ನಾಯಕನಾಗಿ ಅಯ್ಯಪ್ಪ ಪಿ.ಶರ್ಮಾ ಅವಿನಾಶ್ ನಾಯಕನಾಗಿ ಶರತ್ ಲೋಹಿತಾಶ್ವ ಸಾಧು ಕೋಕಿಲ ರಾಜಸ್ತಾನ್ ಮಾರ್ಗದರ್ಶಕನಾಗಿ ಅಲೋಕ್ ಕೃಷಿ ತಾಪಂಡ ಅತಿಥಿ ಪಾತ್ರ ಶಾಲಿನಿ ರಾಜ್ ದೀಪಕ್ ಶೆಟ್ಟಿ ವಾಣಿಶ್ರೀ ಸಂಗೀತಾ "ಭರ ಭರ ಭರಾಟೆ" ಹಾಡಿನಲ್ಲಿ ರಚಿತಾ ರಾಮ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ನಿರ್ಮಾಣ ಮತ್ತು ಬಿಡುಗಡೆ == ಚಲನಚಿತ್ರವನ್ನು 21 ಜೂನ್ 2018 ರಂದು ಘೋಷಿಸಲಾಯಿತು ಮತ್ತು ಪ್ರಮುಖ ಛಾಯಾಗ್ರಹಣವು 10 ಜುಲೈ 2018 ರಂದು ರಾಜಸ್ಥಾನದಲ್ಲಿ ಪ್ರಾರಂಭವಾಯಿತು. ಉಗ್ರಂ (2014), ರಥಾವರ (2015), ಮತ್ತು ಮುಫ್ತಿ (2017) ಯಶಸ್ಸಿನ ನಂತರ, ಶ್ರೀಮುರಳಿ ಕುಮಾರ್ ಅವರೊಂದಿಗೆ ಸಹಯೋಗವನ್ನು ಘೋಷಿಸಿದರು. ಚಿತ್ರದ ನಾಯಕಿಯಾಗಿ ಶ್ರೀ ಲೀಲಾ ಆಯ್ಕೆಯಾಗಿದ್ದಾರೆ. ಅರ್ಜುನ್ ಜನ್ಯ ಅವರನ್ನು ಸಂಗೀತ ನಿರ್ದೇಶಕ ಎಂದು ಘೋಷಿಸಲಾಯಿತು. ಡಬ್ಬಿಂಗ್ 18 ಜೂನ್ 2019 ರಂದು ಪೂರ್ಣಗೊಂಡಿತು ಮತ್ತು ಚಲನಚಿತ್ರವು 18 ಅಕ್ಟೋಬರ್ 2019 ರಂದು ಬಿಡುಗಡೆಯಾಯಿತು. == ಚಿತ್ರಸಂಗೀತ == ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದು ಚಿತ್ರಕ್ಕೆ ಸಂಗೀತವನ್ನೂ ಕೊಟ್ಟಿದ್ದಾರೆ . ಎಲ್ಲಾ ಸಾಹಿತ್ಯವನ್ನು ಚೇತನ್ ಕುಮಾರ್ ಬರೆದಿದ್ದಾರೆ. == ಗಲ್ಲಾ ಪೆಟ್ಟಿಗೆ == ಅದರ ಥಿಯೇಟರ್ ರನ್ನ ಅಂತ್ಯದ ವೇಳೆಗೆ, ಭರಾಟೆ 120 ಮಿಲಿಯನ್ ರೂಪಾಯಿಗಳನ್ನು ಗಳಿಸಿತು. ಚಿತ್ರದ ಸ್ಕೋರ್ ಮತ್ತು ಧ್ವನಿಪಥವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ . ಸಂಗೀತದ ಹಕ್ಕುಗಳನ್ನು ಆನಂದ ಆಡಿಯೋ ಪಡೆದುಕೊಂಡಿದೆ. == ಉಲ್ಲೇಖಗಳು ==